ಮಾಹಿತಿ ಇದ್ದು, ದಾಳಿ ನಡೆಸಿದ್ದರೆ ತಪ್ಪಿಲ್ಲ !

Kannada News

02-08-2017

ಚಿತ್ರದುರ್ಗ: ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, ಡಿಕೆಶಿ ಮನೆ ಕಚೇರಿ ಹಾಗೂ ಈಗಲ್ ಟನ್ ರೆಸಾರ್ಟ್‌ ಮೇಲಿ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.  ಚಿತ್ರದುರ್ಗದಲ್ಲಿಂದು ಮಾತನಾಡಿದ ಅವರು, ಮಾಹಿತಿ ಇದ್ದು, ದಾಳಿ ನಡೆಸಿದ್ದರೆ ತಪ್ಪಿಲ್ಲ, ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಹಣ ಸಿಕ್ಕಿರುವುದು ನೋಡಿದರೆ ಐಟಿ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ಇದ್ದಿರಬಹುದು, ಮಾಹಿತಿ ಇದ್ದರೆ ಈ ಹಿಂದೆಯೇ ದಾಳಿ ಮಾಡಬೇಕಾದ ಅಗತ್ಯ ಇತ್ತು, ಆದರೆ ಈ ಸಂದರ್ಭದಲ್ಲಿ ದಾಳಿ ಮಾಡಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ, ಇದು ಬೇರೆ ರೀತಿಯ ಚರ್ಚೆಗೆ ಗ್ರಾಸವಾಗಿದೆ, ಶಾಸಕರ ಕುದುರೆ ವ್ಯಾಪಾರ ಒಂದು ರೀತಿಯ ಟ್ರೆಂಡ್ ಆಗಿದೆ, ಈ ಸಂಸ್ಕೃತಿ ಆರಂಭವಾಗಿದ್ದೆ ಬಿಜೆಪಿಯವರಿಂದ, ಈಗ ಕಾಂಗ್ರೆಸ್ ನವರೂ ಕುದುರೆ ವ್ಯಾಪಾರ ಮುಂದುವರೆಸಿದ್ದಾರೆ, ರಾಜಕೀಯದಲ್ಲಿ ಘನತೆ ಗೌರವ ಕಡಿಮೆಯಾಗಿದೆ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಪಾಲ್ ಮಸೂಧೆ ಜಾರಿಗೆ ತರಲಾಗಿದೆ, ಆದರೆ ಅದು ಬಳಕೆಗೆ ಬಾರದ ಕಾರಣ ಇದ್ದೂ ಇಲ್ಲದಂತಾಗಿದೆ, ನಾನೂ ಲೋಕಾಯುಕ್ತರಾಗಿದ್ದಾಗ ಮೂವರು ಮುಖ್ಯಮಂತ್ರಿಗಳು ಒಂಭತ್ತು ಮಂದಿ ಮಂತ್ರಿಗಳ ಹೆಸರನ್ನು ವರದಿಯಲ್ಲಿ ಸಲ್ಲಿಸಿದ್ದೆ, ಆದರೆ ಸಮರ್ಪಕವಾದ ತನಿಖೆ ನಡೆದಿಲ್ಲ, ಕಾಂಗ್ರೆಸ್ ಸರ್ಕಾರ ಎಸಿಬಿ ರಚನೆ ಮಾಡುವ ಮೂಲಕ ಲೋಕಾಯುಕ್ತಕ್ಕೆ ಇದ್ದ ಅಧಿಕಾರ ಕಸಿದುಕೊಂಡಿದೆ ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ