ಐಟಿ ದಾಳಿ: ಯಾರಾದರು ಸೂಚಿಸಿದ್ದರೆ ಖಂಡನೀಯ !

Kannada News

02-08-2017

ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ ಹಿನ್ನೆಲೆ, ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಾಪಾರಿಗಳ ಮೇಲೆ, ಕಂಪನಿಗಳ ಮೇಲೆ ಐಟಿ ದಾಳಿ ಮಾಡೋದು ಸಾಮಾನ್ಯ, ಆದರೆ ಇಂದು ರಾಜಕೀಯ ಪ್ರೇರಿತವಾಗಿ ಈ ಐಟಿ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ಗುಜರಾತ್ ನ ಕಾಂಗ್ರೆಸ್ ಶಾಸಕರ ರಕ್ಷಣೆ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆಸಿರುವುದು ಸರಿಯಲ್ಲ ಎಂದಿದ್ದಾರೆ. ಐಟಿ ದಾಳಿ ನಡೆಸಲು  ಯಾರಾದರೂ ಸೂಚನೆ ನೀಡಿದ್ದರೆ ಅದು ಖಂಡನೀಯ ಎಂದರು. ಗುಜರಾತ್ ಕಾಂಗ್ರೆಸ್ ಶಾಸಕರನ್ನ ಬಿಜೆಪಿಯವರು ಇಲ್ಲದ ಆಮಿಷ ಮತ್ತು ಹಣವನ್ನು ನೀಡಿ ಮನವೊಲಿಸಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಅವರೆಲ್ಲ ಬಂದು ಇಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದಕ್ಕೆ ಡಿಕೆ ಶಿವಕುಮಾರ್ ಸಹಕರಿಸಿದ್ದೂ ಇದರಲ್ಲಿ ಯಾವುದೇ ತಪ್ಪಿಲ್ಲ, ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ ಎಂದರು. ದಾಳಿ ಮಾಡುವುದು ತಪ್ಪಲ್ಲ, ಆದರೆ ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದು ಖಂಡನೀಯ, ಯಾವ ಉದ್ದೇಶಕ್ಕಾಗಿ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ, ಇದು ಸರಿಯಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ