ಸದ್ಯದಲ್ಲೇ ನನ್ನ ಮನೆ ಮೇಲೂ ಐಟಿ ದಾಳಿ..?

Kannada News

02-08-2017

ಬೆಂಗಳೂರು: ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಆದಾಯ ತೆರಿಗೆ ಮತ್ತು ಇತರೆ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ಪ್ರಭಾವ ಬೀರುತ್ತಿದೆ, ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ ವಿಧಾನಸೌಧದಲ್ಲಿ ಹೇಳಿದ್ದಾರೆ. ಇಂದು ನಡೆದ ಐಟಿ ದಾಳಿ ಕುರಿತು ಮಾತನಾಡಿದ ಅವರು, ಬಿಜೆಪಿ ರಾಜ್ಯ ಮುಖಂಡರು ನನ್ನ ಮನೆ ಮೇಲೂ ದಾಳಿ ನಡೆಸುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ, ಸದ್ಯದಲ್ಲೇ ನನ್ನ ಮನೆ ಮೇಲೂ ದಾಳಿ ನಡೆಯುತ್ತದೆ. ಬಿಜೆಪಿ ಮೂಲದಿಂದಲೇ ನನಗೆ ಈ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಆ ಮೂಲವನ್ನು ನಾನು ಬಹಿರಂಗ ಪಡಿಸಬಹುದು ಆದರೆ ಅವರ ವಿಶ್ವಾಸ ಕಳೆದು ಕೊಳ್ಳಲು ನನಗೆ ಇಷ್ಟ ಇಲ್ಲ ಎಂದರು. ರಾಜಕೀಯವಾಗಿ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ, ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿ ಕಾರ್ನಿರ್ವಹಿಸ ಬೇಕು, ಆದರೆ ರಾಜಕೀಯಕ್ಕಾಗಿ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೆಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಗೋವಿಂದರಾಜು ಡೈರಿ ವಿಚಾರ ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದು ಇದೇ ವೇಳೆ ಹೇಳಿದ್ದಾರೆ. ಮತ್ತು ಜಿ.ಎಂ. ಸಿದ್ದೇಶ್ ಮನೆ ಮೇಲಿನ ದಾಳಿ ಕೇವಲ ನೆಪ ಮಾತ್ರ, ಖಚಿತ ಮಾಹಿತಿ ಮೇರೆಗೆ ನಾನು ಇಂದು ಸುದ್ದಿಗೋಷ್ಟಿ ಕರೆದು ಮಾತನಾಡುತ್ತಿದ್ದೇನೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರನ್ನು ದುರ್ಬಲಗೊಳಿಸಲು ಬಿಜೆಪಿ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನನ್ನ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ಮುಂದಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎಂ.ಬಿ ಪಾಟೀಲ್ ಪ್ರಭಾವ ಕುಂದಿಸಲು ಯತ್ನ ಇರಬಹುದು ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ