ಇಂದಿನಿಂದ 'ಅಪ್ಪಾಜಿ ಕ್ಯಾಂಟೀನ್’ ಆರಂಭ !

Kannada News

02-08-2017

ಬೆಂಗಳೂರು: ಜೆಡಿಎಸ್ ನ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ಅನ್ನು,  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಅದ್ದೂರಿಯಾಗಿ ಉದ್ಘಾಟನೆ ಮಾಡಿದ್ದಾರೆ. ಬೆಂಗಳೂರಿನ ಬಸವನಗುಡಿ, ವಿಧಾನಸಭಾ ಕ್ಷೇತ್ರದ ಹನುಮಂತನಗರದ ಬಳಿ ನಿರ್ಮಾಣಗೊಂಡ ಅಪ್ಪಾಜಿ ಕ್ಯಾಂಟೀನ್, ಇಂದಿನಿಂದ ಕಾರ್ಯ ನಿರ್ವಹಿಸಲಿದ್ದೂ, 5 ರೂಪಾಯಿಗೆ ತಟ್ಟೆ ಇಡ್ಲಿ, ವಡೆ, ಖಾರಬಾತ್, ಕೇಸರಿಬಾತ್ ಸಿಗಲಿದೆ. 10 ರೂಪಾಯಿಗೆ ರೈಸ್ ಬಾತ್ ,ಮುದ್ದೆ ಬಸ್ಸಾರು, ಅನ್ನ ಸಾಂಬಾರು ಸಿಗಲಿದೆ. ಇನ್ನು 3 ರೂಪಾಯಿಗೆ, ಕಾಫಿ, ಟೀ ಸಿಗಲಿದ್ದೂ, ಇಂದು ಮುದ್ದೆ ಉಚಿತವಾಗಿ ನೀಡಲಾಗುತ್ತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಗೋಪಾಲಯ್ಯ, ಮಾಜಿ ಉಪಮೇಯರ್ ಹೇಮಾಲತ, ವಿಧಾನ ಪರಿಷತ್ತು ಸದಸ್ಯ ಶರವಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ