ವೈದ್ಯರ ಪ್ರತಿಭಟನೆ ಮುಷ್ಕರ

Kannada News

14-03-2017 344

ಬಳ್ಳಾರಿ: ವೈದ್ಯರು ಉತ್ತಮ ಸೇವೆ ನೀಡಲು ಬೇಕಾದ ಭದ್ರತೆ ನೀಡಿ. ರೋಗಿಗಳ ಪ್ರಾಣ ಉಳಿಸಿ ಎಂದು ಇಂದು ಬಳ್ಳಾರಿಯಲ್ಲು ಸರಕಾರಿ ಮತ್ತು ಖಾಸಗಿ  ವೈದ್ಯರು ಪ್ರತಿಭಟನೆ ನಡಸಿರುವುದಲ್ಲದೆ. ಖಾಸಗಿ ನರ್ಸಿಂಗ್ ಹೋಮ್ ಮತ್ತು ಕ್ಲೀನಿಕ್ ಬಂದ್ ಮಾಡಿದ್ದಾರೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್‌ 6 ರಂದು ಚಿಕಿತ್ಸೆ ಫಲಿಸದೇ ಜಿಲ್ಲೆಯ ಸಂಡೂರು ತಾಲೂಕಿನ ಕರೆ ರಾಂಪುರ ಗ್ರಾಮದ ಸುಜಾತ (26) ಬಾಣಂತಿ ಮತ್ತು ಮಗು ಸಾವನ್ನಪ್ಪಿದ್ದರು.  ಈ ಹಿನ್ನೆಲೆಯಲ್ಲಿ ಅಂದು ಸಾವನ್ನಪ್ಪಿದವರ ಸಂಬಂಧಿಕರು ಮತ್ತು ಸಾರ್ವಜನಿಕರು ವಿಮ್ಸ್ ಸೂಪರಿಂಟೆಂಡೆಟ್ ಶ್ರೀನಿವಾಸಲು, ವೈದ್ಯಾಧಿಕಾರಿ ರವಿ ಭೀಮಪ್ಪ ಮತ್ತು ಹಲವು ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು..

ಈ ಸಂಬಂಧ ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸುವಂತೆ ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಈವರೆಗೆ ಯಾರ ಮೇಲೂ ಕ್ರಮ ಜರುಗದ ಹಿನ್ನೆಲೆಯಲ್ಲಿ  ಇಂದಿ ನಗರದಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯರು ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

 ಪದೇ ಪದೇ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ, ಹಲ್ಲೆ ಮಾಡಿದವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಮ್ಸ್ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಧರಣಿ ನಡೆಸಿ. ಆನಂತರ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ  ಮತ್ತು ಎಸ್‌ಪಿಯವರಿಗೆ ಮನವಿ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ಸೇವೆ ಮಾತ್ರ ಒದಗಿಸುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಯೋಗಾನಂದರೆಡ್ಡಿ  ಮಾತನಾಡಿದರು.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ