ನಿಂತಿದ್ದ ಲಾರಿಗೆ ಕಾರು ಡಿಕ್ಕಿ:ಇಬ್ಬರ ದುರ್ಮರಣ !

Kannada News

02-08-2017

ಆನೇಕಲ್: ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊರವಲಯದ ಅನೇಕಲ್ ನಲ್ಲಿ ಸಂಭವಿಸಿದೆ. ಘಟನೆಯು ಇಂದು ಬೆಳಗಿನ ಜಾವ ಸಂಭವಿಸಿದ್ದೂ, ಮೂವರಿಗೆ ಗಂಭೀರ ಗಾಯಗಳಾಗಿವೆ. ಹೊಸೂರು ರಸ್ತೆ ಯಡವನಹಳ್ಳಿ ಗೇಟ್ ಬಳಿ ಈ ಅಪಘಾತ ನಡೆದಿದೆ. ಬೆಂಗಳೂರಿನ ವಿಜಯನಗರದ ಟೆಲಿಕಾಂ ಬಡಾವಣೆ ನಿವಾಸಿಗಳಾದ ಮುಫ್ತಿಯಾರ್(೩೦) ಅಬ್ದುಲ್ ರೆಹಮಾನ್(೪೫) ಮೃತ ವ್ಯಕ್ತಿಗಳು. ಖಲೀಲ್(30) ಜುಬೇದ್ (60) ರಾಜ್ಜಾವುಲ್ಲಾ(57) ತೀವ್ರವಾಗಿ ಗಾಯಗೊಂಡಿದ್ದೂ, ಇವರನ್ನು ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ