ವನ್ಯ ಜೀವಿಗಳ ಕೊಂಬು ಮಾರುತ್ತಿದ್ದವರ ಬಂಧನ !

Kannada News

02-08-2017

ಮೈಸೂರು: ವನ್ಯ ಜೀವಿಗಳ ಕೊಂಬು ಮತ್ತು ತಲೆ ಬುರುಡೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲಾ ಅರಣ್ಯ ಸಂಚಾರಿ ದಳದ ಪೊಲೀಸರ ಕಾರ್ಯಾಚರಣೆ ನಡೆಸಿ, ಎಚ್.ಡಿ ಕೋಟೆ ತಾಲ್ಲೂಕಿನ ಕಾರಾಪುರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕನಕನಹಳ್ಳಿಯ ಯೋಗೇಶ್ (33), ರಾಜು (27), ವಿಜಯ್ (38) ಬಂಧಿತ ಆರೋಪಿಗಳು. ಕಾರಾಪುರದ ಸೆರಾಯ್ ರೆಸಾರ್ಟ್ ಬಳಿ ಅಕ್ರಮವಾಗಿ ಕಡವೆ, ಜಿಂಕೆ ಹಾಗೂ ಕಾಡೆಮ್ಮೆಗಳ ಕೊಂಬುಗಳು, ಜಿಂಕೆಗಳ  ತಲೆ ಬುರುಡೆಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವನ್ಯಜೀವಿಗಳ ಕೊಂಬು, ತಲೆ ಬುರುಡೆಗಳು ವಶಕ್ಕೆ ಪಡೆದಿದ್ದಾರೆ. ಮತ್ತು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ