ಬಿ.ಎಂ.ಆರ್.ಸಿ.ಎಲ್ ವಿರುದ್ಧ ದೂರು ದಾಖಲು !

Kannada News

01-08-2017

ಬೆಂಗಳೂರು: ಕನ್ನಡ ಭಾಷೆಗೆ ಮೆಟ್ರೋ ರೈಲು ನಿಗಮ ಅಗೌರವ ಸೂಚಿಸಿದ ಸಂಬಂಧ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಪ್ರಸಾದ್ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಮ್ಮ ಮೆಟ್ರೋ ಎಂಡಿ ಪ್ರದೀಪ್ ಸಿಂಗ್ ಖರೋಲಾ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ವಿರುದ್ಧ ದೂರು ದಾಖಲಿಸಲಾಗಿದೆ. ಬಿ.ಎಂ.ಆರ್.ಸಿ.ಎಲ್ ನ ಫಲಕಗಳಲ್ಲಿ ಕನ್ನಡಕ್ಕೆ ಸ್ಥಾನಮಾನವನ್ನ ನೀಡದೇ ಅಗೌರವ ತೋರಿದ್ದಾರೆ. ಕೇವಲ ಹಿಂದಿ ನಾಮಫಲಕ ಅಳವಡಿಸಿ ಭಾಷಾ ವೈಷಮ್ಯಕ್ಕೆ ಕಿಚ್ಚು ಹಚ್ಚುವ ಕೆಲಸಕ್ಕೆ ಬಿ.ಎಂ.ಆರ್.ಸಿ .ಎಲ್ ಮುಂದಾಗಿದೆ ಎಂದ ಅವರು, ಕನ್ನಡಕ್ಕೆ ಅವಮಾನವಾಗುತ್ತಿರುವ ವಿಚಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಗಮನಕ್ಕೆ ಬಂದಿದ್ದರೂ, ಕೂಡ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಅದಕ್ಕಾಗಿ ಭಾಷಾ ವೈಷಮ್ಯವನ್ನು ಬಿತ್ತುತ್ತಿರುವ ಬಿ.ಎಂ.ಆರ್.ಸಿ.ಎಲ್ ವಿರುದ್ದ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳುವಂತೆ ವಿಧಾನಸೌಧ ಠಾಣೆಗೆ ದೂರನ್ನು ನೀಡಲಾಗಿದೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ