ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ !

Kannada News

01-08-2017

ಬೆಂಗಳೂರು: ಸಂಜಯನಗರದ ನ್ಯೂಬಿಇಎಲ್ ರಸ್ತೆಯಲ್ಲಿ ಮಂಗಳವಾರ ನಸುಕಿನಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡ ದುಷ್ಕರ್ಮಿಯೊಬ್ಬ ಚಾಕು ತೋರಿಸಿ ಬೆದರಿಸಿ ಚಿನ್ನದ ಉಂಗುರ, ನಗದು ಸುಲಿಗೆ ಮಾಡಿ ಮಾಡಿಪರಾರಿಯಾಗಿದ್ದಾನೆ. ಚಿಕ್ಕಮಾರನಹಳ್ಳಿಯ 6ನೇ ಕ್ರಾಸ್‍ನ ಹೆಚ್.ಡಿ.ಎಫ್‍.ಸಿ ಸೇಲ್ಸ್ ಪ್ರೈವೆಟ್ ಲಿಮಿಟೆಡ್‍ನ ಉದ್ಯೋಗಿ ಸೆಂಚಲ್ ಪಾಂಡೆ ಅವರು ಪತ್ನಿಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಅಲ್ಲಿಂದ ಮುಂಜಾನೆ 5.40ರ ವೇಳೆ ನ್ಯೂಬಿಇಎಲ್ ವರ್ತುಲ ರಸ್ತೆಯ ಬಳಿ ಬಿಎಂಟಿಸಿ ಬಸ್ ಇಳಿದು ಮನೆಗೆ ಹೋಗಲು ಮತ್ತೊಂದು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಬಂದ ದುಷ್ಕರ್ಮಿಯೊಬ್ಬ ಚಿಕ್ಕಮಾರನಹಳ್ಳಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಹೋದ ನಂತರ ಚಾಕು ತೋರಿಸಿ ಬೆದರಿಸಿ 300 ರೂ. ನಗದು, 4 ಗ್ರಾಂ ಚಿನ್ನದ ಉಂಗುರವನ್ನು ಕಸಿದು ಕಾರಿನಿಂದ ಇಳಿಸಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿರುವ ಸಂಜಯನಗರ ಪೊಲೀಸರು ದುಷ್ಕರ್ಮಿಗಾಗಿ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ