ಟಿ.ಆರ್.ಎಸ್ ಮುಖಂಡನ ಮಗನಿಂದ ಹಲ್ಲೆ !

Kannada News

01-08-2017

ಹೈದರಾಬಾದ್: ತೆಲಂಗಾಣದ ಟಿ.ಆರ್.ಎಸ್ ನಾಯಕ ರಾಮ್ ಮೋಹನ್ ಗೌಡ್ ರವರ ಮಗ ಟೋಲ್ ಗೇಟ್ ನ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಶ್ರೀ ಶೈಲಂ ನ ಮಾರ್ಗ ಮಧ್ಯದಲ್ಲಿರುವ ಕಡ್ತಾಲ ಟೋಲ್ ಬಳಿ ಟಿ.ಆರ್.ಎಸ್ ನ ನಾಯಕನ ಮಗ ಮನೀಶ್ ತನ್ನನು ಟೋಲ್‌ ಪ್ಲಾಜಾದಲ್ಲಿ ವಾಹನ ತಡೆದರು ಎಂಬ ಕಾರಣಕ್ಕಾಗಿ ಆತನ ಬೆಂಬಲಿಗರು ಮತ್ತಯ ಮನೀಶ್ ಟೋಲ್‌ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ರಸ್ತೆಯ ಉದ್ದಕ್ಕೂ ಅಟ್ಟಾಡಿಸಿಕೊಂಡು ಚಾಕುವಿನಿಂದ ಇರಿದಿದ್ದಾರೆ.

ಈ ದೃಶ್ಯಗಳು ಟೋಲ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮಂಕಾಲ್ ಪೊಲೀಸರು ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೀಶ್ ಹಾಗೂ ಆತನ ಸ್ನೇಹಿತರು ಶ್ರೀಶೈಲಂ ಹೈವೆ ನಲ್ಲಿ ತೆರಳುತ್ತಿದ್ದರು, ರಾತ್ರಿ 9.30 ರ ಸುಮಾರಿಗೆ ಬಂದ ವಾಹನವನ್ನು ಟೋಲ್ ಸಿಬ್ಬಂದಿ ತಡೆದು ಶುಲ್ಕ ನೀಡುವಂತೆ ಕೇಳಿದ್ದಾರೆ. ಆದರೆ ಈ ವೇಳೆ ಶುಲ್ಕ ನೀಡಲು ಮನೀಶ್ ನಿರಾಕರಿಸಿದ್ದು, ವಾಹನ ತಡೆದಿದ್ದಕ್ಕೆ ಆಕ್ರೋಶಗೊಂಡು ಹಲ್ಲೆಯನ್ನ ನಡೆಸಿ ಪರಾರಿಯಾಗಿದ್ದಾನೆ. ವಿಷಯ ತಿಳಿದು ಈತನನ್ನ ಹಿಂಬಾಲಿಸಿರುವ ಮಂಕಾಲ್ ಪೊಲೀಸರು ಮನೀಶ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ