ಚಾಕುವಿನಿಂದ ಇರಿದು ಮಹಿಳೆ ಕೊಲೆ !

Kannada News

01-08-2017

ನವದೆಹಲಿ: ದೆಹಲಿಯ ತ್ಯಾಗರಾಜ್ ಮೈದಾನದ ಬಳಿ 40 ವರ್ಷದ ಮಹಿಳೆಯೊಬ್ಬಳನ್ನು ತಡರಾತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಹಲವು ಬಾರಿ ಚಾಕುವಿನಿಂದ ಇರಿದಿರುವುದರಿಂದ ಸಂತೋಷಿ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ನಂತರ ಏಮ್ಸ್ ಟ್ರೋಮಾ ಸೆಂಟರ್ ಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಮೈದಾನದ ಗೇಟ್ ಬಳಿಯೇ ಈ ಕೃತ್ಯ ನಡೆದಿದೆ. ಸುಮಾರು 5 ಬಾರಿ ಹಂತಕ ಮಹಿಳೆಗೆ ಚಾಕುವಿನಿಂದ ಇರಿದಿದ್ದ, ಮಹಿಳೆ ನೋವಿನಿಂದ ಕೂಗಿಕೊಳ್ಳುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಗಳು ನೆರವಿಗೆ ಆಗಮಿಸಿದ್ದರು. ಕೂಡಲೇ ಹಂತಕ ಅಲ್ಲಿಂದ ಓಡಿ ಹೋಗಿದ್ದಾನೆ. ಸಿಸಿ ಟಿವಿಯಲ್ಲಿ ಈ ಹತ್ಯೆಯ ದೃಶ್ಯ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಂತೋಷಿ ಪತಿಯಿಂದ ಬೇರೆಯಾಗಿದ್ಲು. ಆಕೆಯ ಪತಿ ರಾಮಬಾಬು ರಾಜಸ್ತಾನದಲ್ಲಿ ವಾಸಿಸುತ್ತಿದ್ದ. ದೆಹಲಿಯಲ್ಲಿ ಸಂತೋಷಿ ತನ್ನ 5 ಮಕ್ಕಳ ಜೊತೆ ವಾಸವಾಗಿದ್ಲು. ಸಂತೋಷಿ ಹತ್ಯೆಯಿಂದ ಅವಳ ಐವರು ಮಕ್ಕಳು ಅನಾಥರಾಗಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

ನವದೆಹಲಿ ಚಾಕುವಿನಿಂದ ಮಹಿಳೆ ಕೊಲೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ