ಐಸಿಸ್ ಸೇರಿದ್ದ ಕೇರಳದ ಯುವಕ ಸಾವು !

Kannada News

01-08-2017

ತಿರುವನಂತಪುರಂ: ಕಳೆದ ವರ್ಷ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ ಕೇರಳದ ಯುವಕ ಅಫ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. 23 ವರ್ಷದ ಮರ್ವನ್ ಇಸ್ಮಾಯಿಲ್ ತರಿಕರಿಪುರದ ನಿವಾಸಿಯಾಗಿದ್ದ. ಐಸಿಸ್ ಸೇರಬೇಕು ಅಂತಾನೇ 2016ರ ಮೇನಲ್ಲಿ ಮನೆಬಿಟ್ಟು ಹೋಗಿದ್ದ. ಒಟ್ಟು 21 ಯುವಕರು ಉಗ್ರ ಸಂಘಟನೆ ಸೇರಲು ತೆರಳಿದ್ದರು. ಅವರಲ್ಲಿ ಮರ್ವನ್ ಕೂಡ ಒಬ್ಬ. ಆತ ಅಫ್ಘಾನಿಸ್ತಾನದ ನಂಗರ್ಹಾರ್ ಎಂಬಲ್ಲಿ ಅಡಗಿದ್ದಾನೆ ಅನ್ನೋ ಮಾಹಿತಿ ಇತ್ತು. ಈ ಪ್ರದೇಶವನ್ನು ಭಾಗಶಃ ಐಸಿಸ್ ಸಂಘಟನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಉಗ್ರರನ್ನು ಮಟ್ಟಹಾಕಲು ನಡೆಸಿದ ಡ್ರೋನ್ ದಾಳಿಯಲ್ಲಿ ಮರ್ವನ್ ಹತನಾಗಿದ್ದಾನೆ. ಕಳೆದ ವರ್ಷ ಐಸಿಸ್ ಸೇರಿದ್ದ ದಕ್ಷಿಣ ಭಾರತದ ಮತ್ತೊಬ್ಬ ಯುವಕ ಕೂಡ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ