ರೌಡಿಗಳನ್ನು ಥಳಿಸಿದ ಗ್ರಾಮಸ್ಥರು

Kannada News

01-08-2017

ಪಾಟ್ನಾ: ಬಿಹಾರದ ಮುಜಾಫರ್ಪುರದಲ್ಲಿ ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದ ಇಬ್ಬರು ರೌಡಿಗಳಿಗೆ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಒಬ್ಬ ರೌಡಿ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಘಟನೆಯ ಎರಡು ವಿಡಿಯೋ ವೈರಲ್ ಆಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಘಟನೆ ನಡೆದಿರುವುದು ಮುಜಾಫರ್ಪುರದ ಸರಾಯಾ ಪ್ರದೇಶದಲ್ಲಿ. ಕೆಲ ತಿಂಗಳಿಂದ ಇಬ್ಬರು ರೌಡಿಗಳು ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದರು. ಗ್ರಾಮದಲ್ಲಿ ಕಳ್ಳತನ ಪ್ರಕರಣ ಕೂಡ ಹೆಚ್ಚಾಗಿತ್ತು. ರೌಡಿಗಳಿಗೆ ಬುದ್ದಿ ಕಲಿಸಲು ಮುಂದಾದ ಗ್ರಾಮಸ್ಥರು ಯೋಜನೆ ರೂಪಿಸಿದ್ದಾರೆ. ಬೈಕ್ ನಲ್ಲಿ ಬಂದ ರೌಡಿಗಳನ್ನು ಹಿಡಿದು ಥಳಿಸಿದ್ದಾರೆ. ಘಟನೆಯಲ್ಲಿ ಗ್ರಾಮದ ಇಬ್ಬರಿಗೂ ಗಾಯಗಳಾಗಿವೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕೊಲೆಯಾಗಿರುವ ರೌಡಿ ಮೇಲೆ ಗ್ರಾಮದ ಮುಖ್ಯಸ್ಥನ ಮಗನನ್ನು ಕೊಲೆ ಮಾಡಿರುವ ಆರೋಪವಿತ್ತು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ