ಕುಖ್ಯಾತ ರೌಡಿ ಮೇಲೆ ಶೂಟೌಟ್ !

Kannada News

01-08-2017

ಕಲಬುರಗಿ: ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆ ಮೇಲೆ ಶೂಟೌಟ್ ಮಾಡಲಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿ ಘಟನೆ ಸಂಭವಿಸಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಮುಂದಾದಾಗ ಶೂಟೌಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಲಕ್ಷ್ಮಿಕಾಂತ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆ,  ಕಲಬುರಗಿ ತಾಲ್ಲೂಕಿನ ನಂದೂರು ಗ್ರಾಮದ ನಿವಾಸಿಯಾಗಿದ್ದೂ, ಇತನ ಮೇಲೆ ಕೋಕಾ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಲ್ಲಿಕಾರ್ಜುನನ ಖಿಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದೂ, ಈ ವೇಳೆ ಪೊಲೀಸರು ಮತ್ತು ಕರಿಚಿರತೆ ಮಲ್ಲಿಕಾರ್ಜುನ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಮೇಲೆ ನಾಡ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಲು ಮುಂದಾದ ಮಲ್ಲಿಕಾರ್ಜುನನ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಗ್ರಾಮೀಣ ಡಿಎಸ್ಪಿ ಹುಲ್ಲೂರ್, ಪೇದೆಗಳಾದ ಆನಂದ್ ಮತ್ತು ಶ್ರಿಶೈಲ್ ಅವರಿಗೆ  ಗಾಯಗಳಾಗಿವೆ. ಇವರು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ