ಹೆದ್ದಾರಿ ದರೋಡೆಕೋರರ ಬಂಧನ

Kannada News

01-08-2017

ಹುಬ್ಬಳ್ಳಿ: ಹೆದ್ದಾರಿಯಲ್ಲಿ ಹೊರ ರಾಜ್ಯದ ಲಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಲವಾರು ತಿಂಗಳಿನಿಂದ ಕುಸುಗಲ್ಲ್ ರಸ್ತೆಯಲ್ಲಿ, ಹೊರ ರಾಜ್ಯದ ಲಾರಿಗಳನ್ನು ಅಡ್ಡ ಗಟ್ಟಿ ನಿಲ್ಲಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ ಕುರಿತು, ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿ ನವೀನ ಜಕ್ಕಲಿ ಮತ್ತು ಸಿಬ್ಬಂದಿಯವರು,  ನಾಲ್ಕು ಜನ ಕುಖ್ಯಾತ ದರೋಡೆಕೋರರ ಬಂಧಿಸಿದ್ದೂ, ಇನ್ನಿಬ್ಬರು ಪರಾರಿಯಾಗಿದ್ದಾರೆ. ಯಲ್ಲಪ್ಪ, ಹನಮಂತ, ಕುಮಾರ್, ಹಾಗೂ ಸಾಗರ್ ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ಕು ಚಾಕು, ಒಂದು ತಲ್ವಾರ್ ಹಾಗೂ ಕಾರದ ಪುಡಿ ಎರಡು ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ