ಕ್ಯಾಂಟರ್ ಹರಿದು 2 ವರ್ಷದ ಮಗು ಸಾವು !

Kannada News

31-07-2017

ಬೆಂಗಳೂರು: ಆಟ ವಾಡುತ್ತಿದ್ದ ಎರಡು ವರ್ಷದ ಮಗು ಮೇಲೆ, ವೇಗವಾಗಿ ಬಂದ ಕ್ಯಾಂಟರ್ ಹರಿದು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ಲಕ್ಷ್ಮೀಪುರ ರಸ್ತೆಯ, ವಿದ್ಯಾನಗರದ ಮುನೇಶ್ವರ ದೇವಾಲಯದ ಬಳಿ ನಡೆದಿದೆ. ಮೃತಪಟ್ಟಿರುವ ಮಗುವನ್ನು ರವಿಕುಮಾರ್ ಮತ್ತು ಅಮುದಾವತಿ ದಂಪತಿಯ ಎರಡು ವರ್ಷದ ‘ಮೌನ’ ಎಂದು ಗುರುತಿಸಲಾಗಿದೆ. ವಿದ್ಯಾನಗರದ ಮುನೇಶ್ವರ ದೇವಾಲಯದ ಬಳಿ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಂಟರ್ ಹರಿದು ಗಂಭೀರವಾಗಿ ಗಾಯಗೊಂಡ ಮೌನನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದೆ. ಘಟನೆ ನಡೆಯುತ್ತಿದ್ದಂತೆ ಕ್ಯಾಂಟರ್ ಚಾಲಕನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಪೊಲೀಸರು ಚಾಲಕ ಹಾಗೂ ಕ್ಯಾಂಟರ್‍ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ