ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಇರಿತ !

Kannada News

31-07-2017

ಬೆಂಗಳೂರು: ನಗರದ ಹೊರವಲಯದ ಟಿ.ಬೇಗೂರಿನ ಭೈರನಹಳ್ಳಿ ಕ್ರಾಸ್‍ ಬಳಿ ಇರುವ ಮದ್ಯದಂಗಡಿ ಬಳಿ, ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ಉಂಟಾದ ಯವಕರ ಜಗಳ ಓರ್ವ ಯುವಕನಿಗೆ ಚಾಕುವಿನಿಂದ ಇರಿಯುವರೊಂದಿಗೆ ಅಂತ್ಯವಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಬಸವೇಶ್ವರ ನಗರದ ಪರಮೇಶ್, ನೆಲಮಂಗಲದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರ ನಗರದಿಂದ ಭೈರನಹಳ್ಳಿ ಕ್ರಾಸ್‍ಗೆ ಹೋಗಿದ್ದ ಪರಮೇಶ್ ರಾತ್ರಿ 9ರ ವೇಳೆ ಸ್ನೇಹಿತರಾದ ನರಸಿಂಹಮೂರ್ತಿ,ಕಿರಣ್ ಜೊತೆಗೆ ಪಾರ್ಟಿ ಮುಗಿಸಿ ಬಾರ್  ಹೊರಗೆ ನಿಂತಿದ್ದ ವೇಳೆ, ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಪರಮೇಶ್‍ಗೆ ಇರಿದು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ