ರೆಸಾರ್ಟ್ ರಾಜಕಾರಣ ಹೊಸತೇನಲ್ಲ..?

Kannada News

31-07-2017

ರಾಮನಗರ: ಗುಜರಾತ್ ನ ಶಾಸಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ರೆಸಾರ್ಟ್ ರಾಜಕಾರಣ ಹೊಸತೇನಲ್ಲ. ಈ ಬಗ್ಗೆ ಟೀಕಿಸುವ ಮೊದಲು ಬಿಜೆಪಿ ಹಾಗೂ ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದು ಹೇಳಿದ್ದಾರೆ. ರೆಸಾರ್ಟಿನಲ್ಲಿ ಗುಜರಾತ್ ಶಾಸಕರು ಚಟುವಟಿಕೆಯಿಂದ ಇದ್ದಾರೆ. ಗಾಂಧಿ ನಾಡಿನಿಂದ ಬಂದಿರುವ ಅವರು ಸಭ್ಯರಾಗಿದ್ದು, ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ಅವರನ್ನು ನಮ್ಮ ವಿಧಾನಸೌಧಕ್ಕೆ ಕರೆದೊಯ್ಯುಲೂ ಚಿಂತನೆ ನಡೆದಿದ್ದೂ, ಗುಂಪಾಗಿ ಕರೆದೊಯ್ಯಲು ಮಾಧ್ಯಮಗಳು ಬಿಡುತ್ತಿಲ್ಲ ಎಂದರು. ರೆಸಾರ್ಟ್ ವಾಸ್ತವ್ಯಕ್ಕೆ ತಗುಲುವ ವೆಚ್ಚವನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಭರಿಸಲಿದೆ. ನಾನೂ ಸಹ ನನ್ನ ವೆಚ್ಚವನ್ನು ಕ್ರೆಡಿಟ್ ಕಾರ್ಡಿನಿಂದ ಪಾವತಿಸಿದ್ದೇನೆ ಎಂದರು. ಈಗಲ್ ಟನ್ ರೆಸಾರ್ಟ್ ಜಮೀನು ಒತ್ತುವರಿ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆಯಂತೆ ದಂಡ ವಸೂಲಿ ಮಾಡಲು ಈಗಾಗಲೇ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ದುಬಾರಿ ವಾಚ್ ಪ್ರಕರಣ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿಧಾನಸಭೆ ಸ್ವೀಕರ್ ಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿ, ಅವರಿಗೆ ಲೀಡರ್ ಆಗಬೇಕು ಎನ್ನುವ ಆಸೆ ಇದ್ದರೆ ಚುನಾವಣೆಗೆ ಸ್ಪರ್ಧಿಸಲಿ. ಅದನ್ನು ಬಿಟ್ಟು ಇಲ್ಲದ ಆರೋಪ ಮಾಡಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ