ಸಿಎಂ ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ..?

Kannada News

31-07-2017

ಬಳ್ಳಾರಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, ಮಾಜಿ ಸಂಸದ ಎಚ್.ವಿಶ್ವನಾಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ದಲಿತರಿಂದ ಅಟ್ರಾಸಿಟಿ ಕೇಸುಗಳಿಂದ ತಪ್ಪಿಸಿಕೊಳ್ಳಲು ಕುರುಬರು ಪರಿಶಿಷ್ಟ ವರ್ಗಕ್ಕೆ ಸೇರಲು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮ, ವಿಚಾರದ ಕುರಿತು ಮಾತನಾಡಿದ ಅವರು, ವೀರಶೈವ, ಲಿಂಗಾಯತ ಎಂದು ಸಿದ್ದರಾಮಯ್ಯ ವಿಷ ಬೀಜ ಬಿತ್ತಿದ್ದು, ಇದು ಸರಿಯಲ್ಲ ಎಂದಿದ್ದಾರೆ. ದೀಪಾವಳಿ ನಂತರ ಕಾಂಗ್ರೆಸ್ ಮತ್ತು ಬಿಜೆಪಿಯ ಇನ್ನಷ್ಟು  ಶಾಸಕರು, ಮುಖಂಡರು ಜೆಡಿಎಸ್‍ಗೆ ಸೇರಲಿದ್ದಾರೆ ಎಂದುರು. ಗಣಿಹಗರಣ ಮಾಡಿದವರಿಂದ ಹಣ ವಸೂಲಿ ಮಾಡಲಿದ್ದೇವೆ ಎಂದು ಹೇಳಿ, ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಳ್ಳಾರಿಗೆ ಬಂದು ಇದಕ್ಕೆ ಉತ್ತರಿಸಲಿ ಎಂದು ಸವಾಲೆಸೆದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ