ನಾಪತ್ತೆಯಾಗಿದ್ದ ನಾಗರಾಜ್ ತಂಗಡಗಿ ಪತ್ತೆ !

Kannada News

31-07-2017

ಮೈಸೂರು: ನಾಪತ್ತೆಯಾಗಿದ್ದ ನಾಗರಾಜ್ ತಂಗಡಗಿ ಪತ್ತೆಯಾಗಿದ್ದಾರೆ. ನಾಗರಾಜ್ ತಂಗಡಗಿ, ಕನಕಗಿರಿ ಕ್ಷೇತ್ರದ ಶಾಸಕರಾದ ಶಿವರಾಜ್ ತಂಗಡಗಿಯ ಸಹೋದರ. ಕಳೆದ ಜುಲೈ 24 ರಂದು ಕೊಪ್ಪಳದ ಕಾರಟಗಿಯಿಂದ ನಾಪತ್ತೆಯಾಗಿದ್ದರು. ಈ ಕುರಿತು, ಜುಲೈ 26 ರಂದು ರವಿ ತಂಗಡಗಿ ಕೊಪ್ಪಳದ ಗಂಗಾವತಿ ತಾಲ್ಲೂಕಿನ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಇದೀಗ ಮೈಸೂರಿನಲ್ಲಿ ಪತ್ತೆಯಾಗಿದ್ದಾರೆ. ಸಿಪಿಐ ದೀಪಕ್ ಬೂಸರೆಡ್ಡಿ ನೇತೃತ್ವದ ಪೊಲೀಸ್ ತಂಡಕ್ಕೆ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಗರಾಜ್ ತಂಗಡಗಿ ಪತ್ತೆಯಾಗಿದ್ದೂ ವಶಕ್ಕೆ ಪಡೆದಿದ್ದಾರೆ.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ