ರೈತನ ಮೇಲೆ ಕರಡಿ ದಾಳಿ !

Kannada News

29-07-2017

ಉತ್ತರ ಕನ್ನಡ : ಮನೆಯ ಸಮೀಪದ ತನ್ನ ತೋಟದಲ್ಲಿ ರೈತ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕರಡಿಯೊಂದು, ರೈತನ ಮೇಲೆ ಏಕಾಏಕಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯ ಗೋಸ್ಮನೆ ಗ್ರಾಮದಲ್ಲಿ ನಡೆದಿದೆ. ಗೋಸ್ಮನೆ ಗ್ರಾಮದ ರೈತ ಮೋಹನ ಶೇಷು ಮರಾಠಿ (45) ಕರಡಿ ದಾಳಿಗೆ ಒಳಗಾಗಿರುವ ರೈತ. ಘಟನೆಯಲ್ಲಿ ಆತನ ಮುಖ, ತಲೆಯ ಮುಂಭಾಗ, ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಮೈ, ಕೈ ಕಾಲುಗಳಿಗೆ ಪರಚಿದ ಗಾಯವಾಗಿವೆ. ಗಾಯಾಳುವನ್ನು ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆ.ಎಮ್.ಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕರಡಿ ದಾಳಿಗೊಳಗಾದ ರೈತನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಣ್ಣಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಉತ್ತರ ಕನ್ನಡ ರೈತನ ಮೇಲೆ ಕರಡಿ ದಾಳಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ