ಶಾಲೆಗೆ ಅನಧೀಕೃತ ರಜೆ !

Kannada News

29-07-2017

ಕೊಪ್ಪಳ: ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಐದು ದಿನ ಅನಧೀಕೃತ ರಜೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳದ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಅನಧೀಕೃತ ರಜೆ ನೀಡಲಾಗಿದೆ. ನಾಗರಪಂಚಮಿ ನಿಮಿತ್ತವಾಗಿ ಐದು ದಿನ ಅನಧೀಕೃತ ರಜೆ ಘೋಷಣೆ ಮಾಡಿರುವ ಮುಖ್ಯ ಶಿಕ್ಷಕ. ನಾಗರಪಂಚಮಿ ನಿಮಿತ್ತ ಕೇವಲ ಒಂದು ದಿನ ಸ್ಥಾನಿಕ ರಜೆ ನೀಡಲು ಸರಕಾರ ಆದೇಶ ನೀಡಿತ್ತು. ಆದರೆ ಮುಖ್ಯ ಶಿಕ್ಷಕ ಐದು ದಿನ ರಜೆ ನೀಡಿದ್ದಾರೆ. ಸಮಾಜಕಲ್ಯಾಣ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಯಾಗಿದ್ದೂ, ಅನಧೀಕೃತ ರಜೆ ಖಂಡಿಸಿ ಎಸ್.ಎಫ್.ಐ ಸಂಘಟನೆ ವಸತಿ ಶಾಲೆ ಮುಂದೆ ಪ್ರತಿಭಟನೆ ನಡೆಸಿದೆ. ಶಾಲೆಗೆ ರಜೆ ನೀಡಿ ಊರಿಗೆ ತೆರಳಿದ ಶಿಕ್ಷಕರು ಮತ್ತು ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ