ಸಿಮೆಂಟ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ !

Kannada News

29-07-2017

ಕೊಪ್ಪಳ: ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಪ್ರಮಾಣದ ಖಾಲಿ ಸಿಮೆಂಟ್ ಚೀಲ ಸುಟ್ಟು ಕರಕಲಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲ್ಲೂಕಿನ ಗಿಣಗೇರಾ ಹೊರವಲಯದಲ್ಲಿರೋ ಅಲ್ಟ್ರಾಟೆಕ್ ಕಾರ್ಖಾನೆಯ ಖಾಲಿ ಸಿಮೆಂಟ್ ಚೀಲದ ಗೋಡೌನ್ ಗೆ ನಿನ್ನೆ ತಡರಾತ್ರಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಮಾರು ಒಂದು ಕೋಟಿ ಮೌಲ್ಯದ ಸಿಮೆಂಟ್ ಚೀಲಗಳು ಸುಟ್ಟು ಭಸ್ಮವಾಗಿವೆ. ನಿನ್ನೆ ತಡರಾತ್ರಿ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಗದಗ ಬಳ್ಳಾರಿ ಹಾಗೂ ಕೊಪ್ಪಳ ದಿಂದ ಸುಮಾರು 10 ಅಗ್ನಿ ಶಾಮಕದಳದ ವಾಹನದಿಂದ ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲಾಯಿತು. ನಿನ್ನೆ ರಾತ್ರಿ 12 ಗಂಟೆಯಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟ ಸಿಬ್ಬಂದಿ ಇಂದು ಮುಂಜಾನೆ ಏಳು ಗಂಟೆ ಸಮಯಕ್ಕೆ ಬೆಂಕಿ ನಂದಿಸಲು ಯಶಶ್ವಿಯಾಗಿದೆ. ಇನ್ನು ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿದರ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಕಾರ್ಖಾನೆಯ ಒಳಗಡೆ ಮಾದ್ಯಮಗಳಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಲು ಕಾರ್ಖಾನೆಯ ಸಿಬ್ಬಂದಿ ನಿರಾಕಸಿದ್ದೂ , ಕಾರ್ಖಾನೆಯ ಅಧಿಕಾರಿಗಳು ಇಲ್ಲ ಎಂಬ ನೆಪ ಒಡ್ಡಿ ಸಿಬ್ಬಂದಿಗಳು, ಚಿತ್ರೀಕರಣ ಮಾಡಲು ಅವಕಾಶ ನಿರಾಕರಣೆ ಮಾಡಿದ್ದಾರೆ, ಇದನ್ನು ಗಮನಿಸಿದರೆ ಕಾರ್ಖಾನೆಯವರರೇ ವಿಮೆ ಹಣ ಪಡೆದುಕೊಳ್ಳಲು ಬೆಂಕಿಯ ನಾಟಕವಾಡಿದ್ದಾರೆ ಅನ್ನೋ ಆರೋಪವು ಕೇಳಿ ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಕಾರ್ಖಾನೆಯ ಬೆಂಕಿ ಹಿಂದಿನ ಅಸಲಿ ಸತ್ಯ ಹೊರಬರಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ