ನಕಲಿ ಪೊಲೀಸ್ ಪೇದೆ: ಮಹಿಳೆಗೆ ವಂಚನೆ !

Kannada News

29-07-2017

ಮೈಸೂರು: ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿರುವುದಾಗಿ ನಂಬಿಸಿ, ಮದುವೆಯಾಗಿ ವಂಚಿಸಿದ್ದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ. ವಂಚಕ ನಕಲಿ ಪೊಲೀಸ್ ಪೇದೆಯನ್ನು, ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದೂ, ವಿಚಾರಣೆ ನಡೆಸಿದ್ದಾರೆ. ಮೈಸೂರು ತಾಲ್ಲೂಕು ಪರಸಯ್ಯನಹುಂಡಿ ಗ್ರಾಮದ ನಿವಾಸಿ ಶಿವಮೂರ್ತಿ (೨೫) ಬಂಧಿತ ಆರೋಪಿ. ಕಳೆದ ವರ್ಷ ಬೋಗಾದಿ ಗ್ರಾಮದ ದೇವಿಕಾ ಎಂಬ ಯುವತಿಯನ್ನು ಮದುವೆಯಾಗಿದ್ದ ಶಿವಮೂರ್ತಿ, ವಿವಾಹದ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿದ್ದು, ಇದೀಗ ನಿಜಾಂಶ ಬಯಲಾಗಿದೆ.

ಪೊಲೀಸ್ ಇಲಾಖೆಯ ನಕಲಿ ಗುರುತಿನ ಚೀಟಿಯನ್ನೂ ಸಹ ಸಿದ್ದಪಡಿಸಿ ನಂಬಿಸಿದ್ದ ಆರೋಪಿ, ಮದುವೆಗೆ ವರದಕ್ಷಿಣೆಯಾಗಿ ಒಂದು ಲಕ್ಷ ನಗದು, ಮತ್ತು ೨೬೦ ಗ್ರಾಂ ಚಿನ್ನ ಪಡೆದಿದ್ದನು. ಮದುವೆಯಾದ ನಂತರವೂ ಪ್ರತಿದಿನ ಕರ್ತವ್ಯಕ್ಕೆ ತೆರಳುವಂತೆ ಪೊಲೀಸ್ ಸಮವಸ್ತ್ರ ಧರಿಸಿ ಮನೆಯಿಂದ ಹೊರಟು ಅನುಮಾನ ಬರದೆ ರೀತಿ ನಂಬಿಸಿದ್ದಾನೆ. ವಂಚನೆ ಬೆಳಕಿಗೆ ಬರುವಷ್ಟರಲ್ಲಿ,  ಹಲವು ಮಂದಿ ಪರಿಚಯಸ್ಥರಿಂದ ಸುಮಾರು 2 ಕೋಟಿ  ರೂಪಾಯಿ ಸಾಲಮಾಡಿ ತಲೆ ಮರೆಸಿಕೊಂಡಿದ್ದ. ಪತಿಯ ವಂಚನೆಯಿಂದ ಬೇಸತ್ತ ಪತ್ನಿ ದೇವಕಿ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರರಣ ಕುರಿತು ವಂಚನಕನ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು, ಇದೀಗ ಶಿವಮೂರ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ