ಚಾಲಾಕಿ ಸರಗಳ್ಳಿ ಬಂಧನ !

Kannada News

28-07-2017 196

ಮೈಸೂರು: ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಓರ್ವ ಸರಗಳ್ಳಿಯನ್ನು ಬಂಧಿಸಿದ್ದಾರೆ. ಗುಲ್ಬರ್ಗ ಜಿಲ್ಲೆಯ ಸರಿತಾ (೨೫) ಬಂಧಿತ ಆರೋಪಿ. ಈಕೆಯಿಂದ ೬.೫ ಲಕ್ಷ ರೂ. ಮೌಲ್ಯದ ೨೩೩ ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಚಾಮುಂಡಿಬೆಟ್ಟ ಹಾಗೂ ಇತರೆಡೆ ತನ್ನ ಕೈಚಳಕ ತೋರಿಸಿ ಸರಗಳನ್ನು ಕಳುವು ಮಾಡುತ್ತಿದ್ದ, ಚಾಲಾಕಿ ಕಳ್ಳಿ ಬಂಧನದಿಂದ, ಒಟ್ಟು ೭ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಸಂಬಂಧಿತ ಟ್ಯಾಗ್ಗಳು

ಮೈಸೂರು ಚಾಲಾಕಿ ಸರಗಳ್ಳಿ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ