ಬಾಸ್ಕೆಟ್ ಬಾಲ್: ಸೆಮಿಫೈನಲ್ ಗೆ ಭಾರತದ ಮಹಿಳಾ ತಂಡ !

Kannada News

28-07-2017

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಎಫ್‍ಐಬಿಎ, ಏಷ್ಯಾ-ಒಸೇನಿಯಾ ಮಹಿಳಾ ಬಾಸ್ಕೆಟ್‍ಬಾಲ್ ಛಾಂಪಿಯನ್‍ಶಿಪ್‍ನ ‘ಬಿ’ ಗುಂಪಿನಲ್ಲಿ ಭಾರತದ ವನಿತೆಯರ ತಂಡ ಫಿಜಿಯನ್ನು 93-51 ಅಂಕಗಳಿಂದ ಮಣಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ನಿನ್ನೆ ರಾತ್ರಿ ನಡೆದ ಕ್ವಾರ್ಟರ್‍ ಫೈನಲ್ ಪಂದ್ಯದ ಪೂರ್ವಾರ್ಧದಲ್ಲಿ ಭಾರತ ತಂಡ ಫಿಜಿ ವಿರುದ್ಧ 42-23 ಅಂಕಗಳ ಮುನ್ನಡೆ ಪಡೆದಿತ್ತು. ಅನಿತಾ ಪೌಲ್ ದುರೈ ಮತ್ತು ಜೀನಾ ಸ್ಕಾರಿಯಾ 24 ಅಂಕಗಳನ್ನು ಗಳಿಸಿಕೊಡುವ ಮೂಲಕ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮಧ್ಯೆ, ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯವು ಭಾರತೀಯ ಬಾಸ್ಕೆಟ್‍ಬಾಲ್ ಒಕ್ಕೂಟಕ್ಕೆ ಅಧಿಕೃತ ಮಾನ್ಯತೆ ನೀಡಿ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ