ಕಟ್ಟಿಗೆಯಿಂದ ಹೊಡೆದು ಕೊಲೆ: ವ್ಯಕ್ತಿ ಬಂಧನ !

Kannada News

28-07-2017

ಬೆಂಗಳೂರು: ಹೊಟೇಲ್ ನೌಕರನೊಬ್ಬನನ್ನು ಮರದ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಖಾಸ ಜಿಲ್ಲೆಯ ಪಾಲಂಗಟ್ ನಿವಾಸಿ ಮಿಥುದಾಸ್ (28) ಬಂಧಿತ ಆರೋಪಿಯಾಗಿದ್ದಾನೆ. ಕಳೆದಜೂನ್ 20ರಂದು ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಇರುವ ಇಂಪೀರಿಯಲ್ ಹೊಟೇಲ್ ನೌಕರ, ಅಸ್ಸಾಂ ರಾಜ್ಯದ ಸೌರಬ್‍ದಾಸ್ (25) ಎಂಬಾತನನ್ನು ಕೊಲೆ ಮಾಡಿದ್ದ. ಸೌರಬ್‍ದಾಸ್, ಮಿಥುದಾಸ್ ಹೊಸಗುಡ್ಡದಹಳ್ಳಿಯಲ್ಲಿರುವ ಹೋಟೆಲ್ ನೌಕರರು ನೆಲೆಸುವ ಕೊಠಡಿಗೆ ಕರೆದೊಯ್ದು ಮರದ ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆಗೈದು ಪರಾರಿಯಾಗಿದ್ದ. ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ ಗುರುವಾರ ರಾತ್ರಿ 3.15ರ ಸುಮಾರಿಗೆ ಈತನನ್ನು ಬಂಧಿಸಿದೆ. ಉಪ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಾ.ಎಸ್.ಪ್ರಕಾಶ್ ಅವರ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿ ರೋಪಿಯನ್ನು ಬಂಧಿಸಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ