ಮಾದಕ ವಸ್ತು ಮಾರಾಟ: ಕಾಂಗೋ ಪ್ರಜೆ ಬಂಧನ

Kannada News

28-07-2017

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಕಾಂಗೋ ದೇಶದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಣ್ಣೂರಿನ ಕನಕದಾಸ ವೃತ್ತದ ಬಾಬುಸಾಬ್ ಪಾಳ್ಯ ಸರ್ವಿಸ್ ರಸ್ತೆಯಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ, ಕಾಂಗೋದ ಲಿಮೆಟೆ 7ನೇ ಕ್ರಾಸ್ ನಿವಾಸಿ ಪರಗುಂ ಝೊರೆಸಾ ಗ್ಲಾಡಿ (24) ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ ಸುಮಾರು 3.5 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್,  ದ್ವಿ-ಚಕ್ರ ವಾಹನ, 8 ಸಿಮ್ ಕಾರ್ಡ್‍ಗಳು, 7 ಎಲೆಕ್ಷನ್ ಕಾರ್ಡುಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ರೂ. 3,00,000 ಗಳೆಂದು ಅಂದಾಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

ಆರೋಪಿ ವೀಸಾ ನಿಯಮ ಉಲ್ಲಂಘಿಸಿ, ಸುಳ್ಳು ದಾಖಲಾತಿಗಳನ್ನು ಬಳಿಸಿ, ಅನ್ಯ ವ್ಯಕ್ತಿಯ ಹೆಸರಿನಲ್ಲಿ ಪಡೆದ ಸಿಮ್ ಕಾರ್ಡ್‍ಗಳನ್ನು, ತಮ್ಮ ಅನಧೀಕೃತ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆ ಮಾಡುತ್ತಾ ಮಾದಕ ವಸ್ತು ಮಾರಾಟ ಮಾಡಿ ಅಕ್ರಮ ಲಾಭಗಳಿಸುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ಕಂಡುಬಂದಿದೆ. ಆರೋಪಿಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮತ್ತೊಂದೆಡೆ ಬಾಬುಸಾಬ್‍ಪಾಳ್ಯ ಸರ್ವೀಸ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಯೂಸುಫ್ ಇಸ್ಮಾಯಿಲ್ (24) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದಸ 3 ಗ್ರಾಂ ತೂಕದ ಮಾದಕ ವಸ್ತು, ಕೃತ್ಯಕ್ಕೆ ಬಳಸುತ್ತಿದ್ದ 04 ಮೊಬೈಲ್‍ಗಳು, 02 ಲ್ಯಾಪ್‍ಟ್ಯಾಪ್‍ಗಳು, ಒಂದು ಪಾಸ್‍ಪೋರ್ಟ್, ಒಂದು ಹೋಂಡಾ ಆಕ್ಟೀವಾ ದ್ವಿ-ಚಕ್ರ ವಾಹನ, ಪೆನ್‍ಡ್ರೈವ್‍ಗಳು ಸೇರಿದಂತೆ ಒಂದೂವರೆ ಲಕ್ಷ ಮೌಲ್ಯದ ಮಾಲುಗಳು ಮತ್ತು ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ