ಪಿಎಸ್ಐ ಮನೆ ಮೇಲೆ ಎಸಿಬಿ ದಾಳಿ !

Kannada News

28-07-2017

ಹುಬ್ಬಳ್ಳಿ: ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರೈಲ್ವೆ ಪಿಎಸ್ಐ ಮಲ್ಲೇಶ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚನ್ನಪಟ್ಟಣ ನಗರದ ಕೋಟೆ ಬೀದಿಯಲ್ಲಿರುವ ಮನೆ ಮೇಲೆ ಮತ್ತು, ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಕಚೇರಿ ಮೇಲೆ ಏಕಕಾಲದಲ್ಲಿ, ಡಿ.ವೈ.ಎಸ್.ಪಿ ವಜೀರ್ ಆಲಿಖಾನ್ ನೇತೃತ್ವದ ತಂಡ, ದಾಳಿ ನಡೆಸಿ, 300 ಗ್ರಾಂ.ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಮತ್ತು ಇತೆರೆ ದಾಖಲೆಗಳ ಪರಿಶೀಲನೆ ನಡೆಸಿದ್ದೂ, 10 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ದಾಳಿ ಮಾಡಿದ್ದಾರೆ. ಪಿಎಸ್ಐ ಮಲ್ಲೇಶ್ ಇದೇ ಜುಲೈ 31 ಕ್ಕೆ ನಿವೃತ್ತಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರು ಹುಬ್ಬಳ್ಳಿಯ ರೈಲ್ವೆ ಪೊಲೀಸ ಠಾಣೆಯ‌ ಕ್ರೈಮ್ ವಿಭಾಗದ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೂ, ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿರೋ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ