ಕರಾಳ ದಿನ ಆಚರಿಸಿದ ನವಲಗುಂದ !

Kannada News

28-07-2017

ಧಾರವಾಡ: ಧಾರವಾಡ ಜಿಲ್ಲೆಯ, ನವಲಗುಂದ ತಾಲ್ಲೂಕಿನಲ್ಲಿ ಇಂದು ಕರಾಳದಿನ ಆಚರಣೆ ಮಾಡಿದ್ದಾರೆ. ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ಅರ್ಜಿ ವಜಾಗೊಂಡಾಗ, ನಡೆದ ಗಲಾಟೆ ಹಿನ್ನೆಲೆಯಲ್ಲಿ, ಪಕ್ಷಾತೀತ ಹೋರಾಟ ಸಮಿತಿ ಕರಾಳ ದಿನಾಚರಣೆ ಆಚರಿಸಿದೆ. ಗಲಾಟೆ ನಡೆದು ಇಂದಿಗೆ ಒಂದು ವರ್ಷ, ಅಂದು ಗಲಾಟೆಯಲ್ಲಿ ಅಮಾಯಕ ಜನರು, ನೀರಿಗಾಗಿ ಹೋರಾಡಿದ ರೈತರನ್ನು ಮನಬಂದಂತೆ ಥಳಿಸಿದ್ದರು. ಘಟನೆಯಿಂದ ಭಾರೀ ನೋವಾಗಿದೆ. ನೀರಿಗಾಗಿ ಹೋರಾಡಿದ್ದಕ್ಕಾಗಿ ನಮಗೆ ಸಿಕ್ಕಿದ್ದು ಪೊಲೀಸರ ಲಾಟಿ ಏಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಧನ ಹಿನ್ನೆಲೆ ಅರೆಬೆತ್ತಲೆ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹ ನಾಳೆಗೆ ಮುಂದೂಡಿದ್ದೇವೆ, ಎಂದು ಪಕ್ಷಾತೀತ ಹೋರಾಟ ಸಮಿತಿ ಮುಖಂಡರು ತಿಳಿಸಿದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ