ಶಾಸಕನ ಸಹೋದರ ನಾಪತ್ತೆ...?

Kannada News

28-07-2017

ಕೊಪ್ಪಳ: ಶಾಸಕ ಶಿವರಾಜ್ ತಂಗಡಗಿ ಸಹೋದರ, ನಾಗರಾಜ್ ತಂಗಡಗಿ ಕಾಣೆಯಾಗಿದ್ದಾನೆಂದು, ಕೊಪ್ಪಳದ ಗಂಗಾವತಿ ತಾಲ್ಲೂಕಿನ, ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿರಿಯ ಸಹೋದರ ರವಿ ತಂಗಡಗಿ ದೂರು ನೀಡಿದ್ದೂ, ಕಳೆದ ಜುಲೈ 24 ರಂದು ಕ್ಷೌರ ಮಾಡಿಸಿಕೊಂಡು ಬರಲು ಹೋಗಿ, ಕಾಣೆಯಾಗಿದ್ದಾರೆಂದು ದೂರು ಸಲ್ಲಿಸಿದ್ದಾರೆ. ಜಿಲ್ಲೆಯ ಕಾರಟಗಿಯಿಂದ ನಾಪತ್ತೆಯಾಗಿದ್ದಾರೆಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ನಾಗರಾಜ್ ತಂಗಡಗಿ, ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿಯ ಸಹೋದರ. ಕಾಣೆಯಾದ ನಾಗರಾಜ್ ತಂಗಡಗಿಯನ್ನು ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿಮಾಡಿದ್ದಾರೆ. ಶಾಸಕರ ಸಹೋದರನೇ ನಾಪತ್ತೆಯಾಗಿರುವ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ.


ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಶಾಸಕನ ಸಹೋದರ ನಾಪತ್ತೆ...?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ