ಸಿಕ್ಕಿಬಿದ್ದ ಕೊಲೆ ಆರೋಪಿಗಳು !

Kannada News

28-07-2017

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಮುಸ್ತಾಫ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಕೈ-ಕಾಲು ಕಟ್ಟಿ, ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ರಘು(೨೫) ಮುಭಾರಕ್ (೨೩) ಬಂಧಿತ ಆರೋಪಿಗಳು. ಕಳೆದ ಜುಲೈ 23 ರಂದು ಮುಸ್ತಾಫ ಎಂಬುವವನನ್ನು ಕೊಲೆ ಮಾಡಿ, ನಂತರ ಮಳವಳ್ಳಿ ತಾಲ್ಲೂಕಿನ, ಮಾರೆಹಳ್ಳಿ ಕೊಳದ ಬಳಿ ಮೃತ ದೇಹವನ್ನು ಎಸೆದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ, ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು, ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿತ್ತು ಎಂದು ತಿಳಿದು ಬಂದಿದೆ. ಮುಬಾರಕ್ ಬಳಿ ಹಣ ಪಡೆದಿದ್ದ ಮುಸ್ತಾಫ, ಹಣ ವಾಪಸ್ ಕೊಡದೇ ಅವಾಚ್ಯ ಶಬ್ದಗಳಿಂದ ಮುಬಾರಕ್‌ ನನ್ನು ನಿಂದಿಸಿದ್ದನು, ಇದರಿಂದ ಕರೆಳಿದ ಮುಬಾರಕ್ ಮತ್ತು ಆತನ ಸಹಚರರು ಮುಸ್ತಾಫನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ