ವ್ಯಕ್ತಿ ಅನುಮಾನಾಸ್ಪದ ಸಾವು !

Kannada News

28-07-2017

ಮೈಸೂರು: ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಸರಗೂರಿನಲ್ಲಿ ಘಟನೆ ಸಂಭವಿಸಿದ್ದೂ, ವಿದ್ಯುತ್ ಕಂಬ ನೆಡಲು ತೋಡಿದ್ದ ಗುಂಡಿಗೆ ಬಿದ್ದ ಸ್ಥಿತಿಯಲ್ಲಿ, ವ್ಯಕ್ತಿಯ ಶವ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ತೋಡಿರುವ ಗುಂಡಿಯಲ್ಲಿ ತಡರಾತ್ರಿ ತಲೆ ಕೆಳಗಾಗಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗಿದ್ದೂ, ಮುಖ ಮತ್ತು  ದೇಹದ ಮೇಲೆ ಗಾಯದ ಗುರುತುಗಳು  ಪತ್ತೆಯಾಗಿವೆ. ವ್ಯಕ್ತಿ ಜೇಬಿನಲ್ಲಿದ್ದ ಡೈರಿಯಲ್ಲಿ ಸಿಕ್ಕ, ಮೊಬೈಲ್ ಫೋನ್ ನಂಬರ್ ಗಳ ಮೂಲಕ ವ್ಯಕ್ತಿಯ ಗುರುತು ಪತ್ತೆಗೆ ಪ್ರಯತ್ನಿಸುತ್ತಿದ್ದೂ, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ