ಲಾರಿ ಡಿಕ್ಕಿ ಮಹಿಳೆ ಸಾವು !

Kannada News

27-07-2017

ಉಡುಪಿ: ವೇಗವಾಗಿ ಬಂದ ಲಾರಿ, ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಎರ್ಮಾಳುವಿನಲ್ಲಿ ಘಟನೆ ಸಂಭವಿಸಿದೆ. ಉಡುಪಿ ತಾಲ್ಲೂಕಿನ ಎರ್ಮಾಳು ಹೆಜಮಾಡಿ ನಿವಾಸಿಯಾದ ಜಾನಕಿ(60)ಮೃತ ಮಹಿಳೆ. ನಾಗರ ಪಂಚಮಿ ಆಚರಿಸಿ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದೂ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಉಡುಪಿ ಲಾರಿ ಡಿಕ್ಕಿ ಮಹಿಳೆ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ