ಹೈಟೆಕ್ ವೇಶ್ಯಾವಾಟಿಕೆ ಇಬ್ಬರ ಬಂಧನ !

Kannada News

27-07-2017

ಬೆಂಗಳೂರು: ಲೋಕಾಂಟೊ ಎಂಬ ವೆಬ್ ಸೈಟ್‍ ನಲ್ಲಿ ಹುಡುಗಿಯರ ಜಾಹೀರಾತು ಪ್ರಕಟಿಸಿ ಗಣ್ಯವ್ಯಕ್ತಿಗಳಿಗೆ ಯುವತಿಯರನ್ನು ಒದಗಿಸುತ್ತಾ, ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳು ಬೊಮ್ಮನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಭದ್ರಾವತಿಯ ಹೊಸಪಾಳ್ಯದ ಮಹೇಶ ಅಲಿಯಾಸ್ ಕಾರ್ತಿಕ್ (27), ಚನ್ನರಾಯಪಟ್ಟಣದ ಹೊಸ ಪಾಳ್ಯದ ರವೀಶ ಅಲಿಯಾಸ್ ರವಿ (30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಆರೋಪಿಗಳು ಲೋಕಾಂಟೊ ವೆಬ್ ಸೈಟ್‍ ನಲ್ಲಿ ಕಾಲೇಜು ಯುವತಿಯರು, ಸಾಫ್ಟ್ ವೇರ್ ಎಂಜಿನಿಯರ್ ಗಳು  ಹಾಗೂ ಕಾಲ್ಗರ್ಲ್ ಗಳು ಸೇವೆಗೆ ಲಭ್ಯವಿದ್ದಾರೆ, ಎಂದು ಅವರ ಫೋಟೊ, ಮೊಬೈಲ್ ನಂಬರ್‍ ಗಳನ್ನು ಅಪ್ಲೋಡ್ ಮಾಡಿ ಜಾಹೀರಾತು ಪ್ರಕಟಿಸುತ್ತಿದ್ದರು. ಏಜೆಂಟರ ನಂಬರ್ ಗಳನ್ನು ಗ್ರಾಹಕರಿಗೆ ನೀಡಿ, ನಿರ್ದಿಷ್ಟ ಸ್ಥಳಕ್ಕೆ ಗ್ರಾಹಕರನ್ನು ಕರೆಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸಲು ಹುಡುಗಿಯರನ್ನು ಕಳುಹಿಸಿಕೊಡುತ್ತಿದ್ದರು. ಈ ಹೈಟೆಕ್ ವೇಶ್ಯಾವಾಟಿಕೆಯ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ರವೀಶ್ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿದ್ದು, ಸಿಸ್ಟಾ ಹಾಸ್ಪೆಟಾಲಿಟಿ ಸರ್ವೀಸ್ ಕಂಪನಿಗೆ ಬರುವ ಅತಿಥಿಗಳ ಮಾಹಿತಿ ಸ್ವೀಕರಿಸಿ ಅವರಿಗೆ ಊಟ, ವಸತಿಯ ವ್ಯವಸ್ಥೆ ಮಾಡುತ್ತಿದ್ದ. ಈ ಸಮಯದಲ್ಲಿ ಅತಿಥಿಗಳಿಗೆ ಯುವತಿಯರನ್ನು ಪೂರೈಸುತ್ತಿದ್ದ. ಮತ್ತೊಬ್ಬ ಆರೋಪಿ ಮಹೇಶ್ ಜೊತೆ ಪರಿಚಯ ಮಾಡಿಕೊಂಡು ಯುವತಿಯರ ಫೋಟೊಗಳನ್ನು ಲೋಕಾಂಟೊ ವೆಬ್‍ ಸೈಟ್‍ನಲ್ಲಿ ಅಪ್ಲೋಡ್ ಮಾಡಿ ದಂಧೆ ನಡೆಸುತ್ತಿದ್ದರು. ಆರೋಪಿಗಳು ಕೆಲಸ ಹುಡುಕಿಕೊಂಡು ಬರುತ್ತಿದ್ದ ನಿರುದ್ಯೋಗಿ ಮಹಿಳೆಯರು ಮತ್ತು ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ