ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರ !

Kannada News

27-07-2017

ಬೆಂಗಳೂರು: ಒಂಟಿಯಾಗಿದ್ದ ಮಹಿಳೆಯ ಮನಗೆ ನುಗ್ಗಿರುವ ಗ್ರಾಮ ಪಂಚಾಯ್ತಿ ಸದಸ್ಯನೋರ್ವ, ಆಕೆಯ ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರ ಎಸಗಿ ಪರಾರಿಯಾಗಿರುವ  ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿಮ್ಮಂಪಲ್ಲಿಯಲ್ಲಿ ನಡೆದಿದೆ. ತಿಮ್ಮಂಪಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಪ್ಪ ಎಂಬಾತ ಅತ್ಯಾಚಾರ ವೆಸಗಿರುವ ಆರೋಪಿಯಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೊಂಚುಹಾಕಿದ್ದ ಕಾಮುಕ ಕೃಷ್ಣಪ್ಪ ಮಹಿಳೆಯ ಮನೆಗೆ ನುಗ್ಗಿ ಈ ದುಷ್ಕೃತ್ಯ ಎಸಗಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದ ಗಂಡ ಮನೆಗೆ ಬಂದ ಮೇಲೆ ನಡೆದ ಘಟನೆಯ ವಿವರಿಸಿದ್ದಾಳೆ. ಕೂಡಲೇ ಗಂಡನೊಂದಿಗೆ ತೆರಳಿ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಪರಾರಿಯಾಗಿರುವ ಆರೋಪಿ ಕೃಷ್ಣಪ್ಪನ ಬಂಧನಕ್ಕೆ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ