ಕಿಟಕಿಯಲ್ಲಿ ಮನೆ ಕೀ ಇಟ್ಟವನಿಗೆ ಕಾದಿತ್ತು ಶಾಕ್ !

Kannada News

27-07-2017

ಬೆಂಗಳೂರು: ಕಿಟಕಿಯಲ್ಲಿ ಇಟ್ಟಿದ್ದ ಮನೆಯ ಕೀ ತೆಗೆದುಕೊಂಡು ಮನೆಗೆ ನುಗ್ಗಿದ ಕಳ್ಳರು, ನಗದು ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾಡುಹಗಲೇ ದೋಚಿ ಕಳ್ಳರು ಪರಾರಿಯಾಗಿರುವ ದುರ್ಘಟನೆ ಮಹಾಲಕ್ಷ್ಮಿಲೇಔಟ್‍ನಲ್ಲಿ ನಡೆದಿದೆ. ಕೀ ತೆಗೆದುಕೊಂಡು ಹೋಗದೆ ಕಿಟಕಿಯಲ್ಲಿ ಇಟ್ಟಿದ್ದನ್ನು ನೋಡಿಕೊಂಡಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ, ವಿದ್ಯುತ್ ಗುತ್ತಿಗೆದಾರರ ರಾಮಾಂಜನೇಯಲು ಅವರು ಮನೆ ಬೀಗ ಹಾಕಿ ಕಿಟಕಿಯಲ್ಲಿ ಕೀ ಇಟ್ಟು ಹೋಗಿದ್ದೆಕ್ಕೆ ಸರಿಯಾದ ಬೆಲೆ ತೆತ್ತಿದ್ದಾರೆ.

ಮಹಾಲಕ್ಷ್ಮಿ ಲೇಔಟ್‍ನ ಜೆಎಸ್ ನಗರದ ವಿದ್ಯುತ್ ಗುತ್ತಿಗೆದಾರ ರಾಮಾಂಜನೇಯಲು ಅವರು  ಬೆಳಿಗ್ಗೆ 10ರ ವೇಳೆ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿ ಬಳಿ ಇಟ್ಟು ಕುಟುಂಬ ಸಮೇತ ಹೊರ ಹೋಗಿದ್ದಾರೆ. ಸಂಜೆ 4.30ರ ವೇಳೆ ವಾಪಸ್ಸಾಗಿ ಬಂದು ನೋಡಿದಾಗ, ಕಿಟಕಿಯಲ್ಲಿದ್ದ ಕೀ ತೆಗೆದುಕೊಂಡು ಬೀಗ ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿನ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿದ್ದ 40 ಸಾವಿರ ನಗದು, 120 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕೀ ಇಡುವುದನ್ನು ಗಮನಿಸಿರುವ ದುಷ್ಕರ್ಮಿಗಳೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ರಾಮಾಂಜನೇಯಲು ಅವರು ನೀಡಿರುವ ದೂರು ದಾಖಲಿಸಿರುವ ಮಹಾಲಕ್ಷ್ಮಿಲೇಔಟ್ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ