ಬೈದು ಬುದ್ದಿಹೇಳಿದ್ದಕ್ಕೆ ಯುವಕ ಆತ್ಮಹತ್ಯೆ !

Kannada News

27-07-2017

ಬೆಂಗಳೂರು: ವಿವೇಕನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬುಧವಾರ ಮಧ್ಯರಾತ್ರಿ ಸರಿಯಾಗಿ ಕೆಲಸಕ್ಕೆ ಹೋಗದೆ, ಕುಡಿದು ಬಂದಿದ್ದರಿಂದ ತಂದೆ-ತಾಯಿ ನಿಂದಿಸಿದ್ದಕ್ಕೆ ನೊಂದ ಕಾಲ್‍ಸೆಂಟರ್ ಉದ್ಯೋಗಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಬಿಡಿಎ ಕಾಂಪ್ಲೆಕ್ಸ್ ನ ಫ್ಲಾಟ್‍ ನಲ್ಲಿ ವಾಸಿಸುತ್ತಿದ್ದ ಕಾಲ್‍ಸೆಂಟರ್ ಉದ್ಯೋಗಿ ಅಜಯ್‍ಕುಮಾರ್ (21) ಆತ್ಮಹತ್ಯೆಗೆ ಮಾಡಿಕೊಂಡಿರುವ ಯವಕನಾಗಿದ್ದಾನೆ. ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಕಾಲ್‍ಸೆಂಟರ್‍ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಅಜಯ್‍ಕುಮಾರ್, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೆಲಸಕ್ಕೆ ಹೋಗದೆ ಕುಡಿದು ಬಂದಿದ್ದರಿಂದ, ತಂದೆ ಥಾಮಸ್ ಹಾಗೂ ತಾಯಿ ಫಾರ್ಸೂನ್ ಅವರು ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ನೊಂದ ಅಜಯ್‍ಕುಮಾರ್,ಮನೆಯಲ್ಲಿ ಎಲ್ಲರು ಮಲಗಿದ್ದಾಗ ರಾತ್ರಿ 12ರ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿವೇಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ