ಕಾವೇರಿ ನೀರಿಗಾಗಿ ಮದ್ದೂರು ಬಂದ್ !

Kannada News

27-07-2017

ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕರೆ ನೀಡಿದ್ದ ಮದ್ದೂರು ಬಂದ್ ಗೆ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು, ವರ್ತಕರ ಸಂಘ, ವಕೀಲರು, ಬೆಂಬಲ ನೀಡಿದ್ದೂ, ಮದ್ದೂರಿನ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕಲಾಪ ಬಹಿಷ್ಕರಿಸಿರುವ ವಕೀಲರು, ಅಂಗಡಿ ಬಾಗಿಲು ಹಾಕಿ ವ್ಯಾಪಾರಸ್ಥರೂ ಸಹ ಬಂದ್‌ಗೆ, ಶೇಕಡ ೮೦ ರಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದೂ, ಮದ್ದೂರಮ್ಮ ಕೆರೆಯಲ್ಲಿ ಜಾನುವಾರುಗಳೊಂದಿಗೆ ಜಮಾಯಿಸಿದ ಸಾವಿರಾರು ರೈತರು ಕೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರು ಸೇರಿದಂತೆ ಕೆರೆಯಲ್ಲಿ ಜಮಾಯಿಸಿದ ರೈತರು, ಹೋರಾಟಗಾರರು, ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಈ ಕೂಡಲೆ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಲು ಒತ್ತಾಯಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ