ಪ್ರತ್ಯೇಕ ಧರ್ಮ ವಿಚಾರ: ಸಿಎಂ ಪ್ರತಿಕ್ರಿಯೆ !

Kannada News

27-07-2017 527

ಹುಬ್ಬಳ್ಳಿ: ತೀವ್ರ ವಿವಾದವನ್ನು ಹುಟ್ಟುಹಾಕಿರುವ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಧರ್ಮದ ವಿಷಯವಾಗಿ, ಸರ್ಕಾರ ಈವರೆಗೂ ಯಾವುದೇ ತೀರ್ಮಾನ ಕೈಕೊಂಡಿಲ್ಲ. ನಾನು ವಿಜಯಪುರ ಹಾಗೂ ಧಾರವಾಡಕ್ಕೆ ಹೋದಾಗ ವೀರಶೈವ ಮುಖಂಡರು ಪ್ರತ್ಯೇಕ ಧರ್ಮದ ಕುರಿತು ಮನವಿ ಮಾಡಿದರು, ಆಗ ಅವರ ಮನವಿಯನ್ನು ಪರಿಶೀಲನೆ ಮಾಡುತ್ತೇನೆ ಎಂದು ಮಾತ್ರ ಹೇಳಿದೆ ಎಂದಿದ್ದಾರೆ. ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡಲು, ಸರ್ಕಾರ ಯಾವುದೇ ಸಚಿವರನ್ನು ನೇಮಕ ಮಾಡಿಲ್ಲಾ. ಪ್ರತ್ಯೇಕ ಧರ್ಮದ ಕುರಿತು ಪರ ಹಾಗೂ ವಿರೋಧದವರು ಮನವಿ ಕೊಟ್ಟರೆ ಪರಿಶೀಲನೆ ನಡೆಸುತ್ತೇನೆ ಎಂದರು.

ಇನ್ನುಇದೇ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಜಾತಿಯನ್ನು ಒಂದೇ ರೀತಿ ನೋಡಬೇಕು. ಆದರೆ ಒಬ್ಬ ಮುಖ್ಯಮಂತ್ರಿಯಾಗಿ ಸಮಾಜ ಒಡೆಯುವ ಕೆಲಸಕ್ಕೆ ಹೋಗಬಾರದು ಎಂದಿದ್ದಾರೆ. ಲಿಂಗಾಯತರು ಯಡಿಯೂರಪ್ಪ ನವರಿಗೆ ಬೆಂಬಲ ಸೂಚಿಸುತ್ತಾರೆ, ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯನವರು ರಾಜಕೀಯ ಆರಂಭಿಸಿದ್ದಾರೆ, ಆ ಮೂಲಕ ಜಾತಿ ಜಾತಿಗಳ ನಡುವೆ ಒಡಕುಂಟು ಮಾಡಲು ಪ್ರಚೋದನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಲಿಂಗಾಯಿತರು ಪ್ರತ್ಯೇಕ ಧರ್ಮ ಬೇಕೆಂದು ಸಿದ್ದರಾಮಯ್ಯನವರಿಗೆ ಅರ್ಜಿ ಹಾಕಿರಲಿಲ್ಲ. ಆದರೂ ಸಿದ್ದರಾಮಯ್ಯನವರು ರಾಜಕೀಯ ದೃಷ್ಟಿಯಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಇನ್ನು ಮುಂದೆಯಾದರೂ ಸಿದ್ದರಾಮಯ್ಯನವರು ಎಲ್ಲರನ್ನೂ ಒಂದೇ ರೀತಿ ಎಂದು ಕಾಣಬೇಕು ಎಂದು ಹೇಳಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ