ದೇವಸ್ಥಾನ ಬಾಗಿಲು ಮುರಿದು ಕಳ್ಳತನ !

Kannada News

27-07-2017

ಮೈಸೂರು: ದೇವಸ್ಥಾನದ ಬಾಗಿಲು ಮುರಿದು, ಹುಂಡಿಯಲ್ಲಿದ್ದ ಹಣದೊಂದಿಗೆ, ಸಿಸಿ ಕ್ಯಾಮರಾ ಮತ್ತು ಮಾನಿಟರ್ ಅನ್ನು ಕೂಡ ಹೊತ್ತೊಯ್ದ ಘಟನೆ, ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿನ, ಚಿಕ್ಕದೇವಮ್ಮನ ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ನಡೆಸಿದ ಖದೀಮರು, ಸಿಸಿ ಕ್ಯಾಮಾರಾ, ಕಂಪ್ಯೂಟರ್ ಮತ್ತು ಹುಂಡಿಯಲ್ಲಿನ ಹಣವನ್ನು ಲಪಟಾಯಿಸಿದ್ದಾರೆ. ಕಳೆದ ರಾತ್ರಿ ಸುಮಾರು ೭ ಗಂಟೆ  ವೇಳೆ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೇ ಸ್ಥಳಕ್ಕಾಗಮಿಸಿದ ಸರಗೂರು ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮತ್ತು ಬೆರಳಚ್ಚು ತಜ್ಞರು, ಶಾನ್ವದಳದ ನೆರವಿನಿಂದ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ