ಕೊಲೆ ಆರೋಪಿಗಳ ಬಂಧನ !

Kannada News

27-07-2017

ಮಂಗಳೂರು: ಮಂಗಳೂರಿನಲ್ಲಿ ನಡೆದ ರೌಡಿಶೀಟರ್ ಪವನ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು, ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು, ಬಂಧಿಸಿದ್ದಾರೆ. ಬಿಪಿನ್(29), ಚರಣ್ ರಾಜ್(22) ಮತ್ತು ಹರೀಶ್ (28) ಬಂಧಿತ ಆರೋಪಿಗಳು. ಜುಲೈ 25ರ ಬೆಳಿಗ್ಗೆ ವಾಮಂಜೂರಿನ ಕುಟ್ಟಿಪಲ್ಕೆ ಎಂಬಲ್ಲಿ, ಪಾಳುಬಿದ್ದ ಮನೆಯಲ್ಲಿ ಪವನ್ ರಾಜ್ ನನ್ನು, ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 2009ರಲ್ಲಿ ಕೊಲೆಯಾಗಿದ್ದ ಮಂಗಳೂರಿನ ನಟೋರಿಯಸ್ ರೌಡಿ ವಾಮಂಜೂರು ರೋಹಿ ಎಂಬುವರ ಪುತ್ರ ಪವನ್ ರಾಜ್. ತಂದೆ ಸಾವಿಗೆ ಪ್ರತೀಕಾರಕ್ಕೆ ಕಾಯುತ್ತಿದ್ದ ಕಾರಣಕ್ಕೆ, ಪವನ್ ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದೂ, ಬಂಧಿತರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಮಂಗಳೂರು ಕೊಲೆ ಆರೋಪಿಗಳ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ