ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವು !

Kannada News

27-07-2017

ಮಂಡ್ಯ: ಕಡಿದಾದ ಪ್ರದೇಶಕ್ಕೆ ಬೈಕ್ ಬಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ, ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮಹದೇವಪ್ಪ(೫೫) ಮೃತ ಬೈಕ್ ಸವಾರ. ಈತ  ಮೂಲತಃ ಮಳವಳ್ಳಿಯವರಾಗಿದ್ದೂ, ಕೆ.ಎಂ ದೊಡ್ಡಿಯ ಸಕ್ಕರೆ ಕಾರ್ಖಾನೆಯಲ್ಲಿ ನೌಕರನಾಗಿದ್ದರು. ಇಂದು ಬೈಕ್ ನಲ್ಲಿ ಮುತ್ತತ್ತಿಗೆ ಹೊರಟ ಅವರು, ಪ್ರಯಾಣಿಸುತ್ತಿರುವಾಗ ಬೈಕ್ ನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಕಡಿದಾದ ಪ್ರದೇಶಕ್ಕೆ ಬೈಕ್ ಸಮೇತ ಉರುಳಿದ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲೆಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ