ಕುಖ್ಯಾತ ಕಳ್ಳರ ಬಂಧನ !

Kannada News

26-07-2017

ಬೆಂಗಳೂರು: ರಾಜ್ಯದ ಹಳೇಬೀಡು, ರಾಣೆಬೆನ್ನೂರು, ಹಾನಗಲ್ ಇನ್ನಿತರ ಕಡೆಗಳಲ್ಲಿ ಬೀಗ ಹಾಕಿದ ಅಂಗಡಿಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕತ್ರಿಗುಪ್ಪೆಯ ದೇವಾರಾಂ (39), ಕೆ.ಜಿ ಹಳ್ಳಿಯ ರಫೀಕ್ ಅಹ್ಮದ್ (42), ಹುಬ್ಬಳ್ಳಿಯ ಅಬ್ದುಲ್ ಅಜೀಜ್ (30), ಸಾದಿಕ್ (30) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ 25 ಕೆಜಿ 670 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಳೇಬೀಡು, ರಾಣೆಬೆನ್ನೂರು, ಹಾನಗಲ್ ಇನ್ನಿತರ ಕಡೆಗಳಲ್ಲಿ ಸುತ್ತಾಡುತ್ತ ಬೀಗ ಹಾಕಿದ ಅಂಗಡಿಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕುಮಾರಸ್ವಾಮಿ ಲೇಔಟ್‍ನ ವಿಠ್ಠಲನಗರದಲ್ಲಿ ನಡೆದಿದ್ದ ಮನೆಯೊಂದರ ಕಳವು ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕುಖ್ಯಾತ ಕಳ್ಳರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ