ಒಂಟಿಯಾಗಿ ಒಡಾಡುವವರೇ ಇವರ ಟಾರ್ಗೆಟ್ !

Kannada News

26-07-2017

ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ತಲೆಘಟ್ಟಪುರದ ಮದು ಅಲಿಯಾಸ್ ಪಿಂಟು (19), ರಾಮು ಅಲಿಯಾಸ್ ಸೇಡಂ (20) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 2 ಲಕ್ಷ 20 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಇನ್ನಿತರ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದ ತಲಘಟ್ಟಪುರದ 2 ಸುಲಿಗೆ, 2 ಮನೆಗಳವು ಸೇರಿದಂತೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೇ ನಗರದಲ್ಲಿ ಟೆಂಪೋ ಟ್ರಾವಲರ್ ಹಾಗೂ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಬನಶಂಕರಿಯ ವೀರ ಅಲಿಯಾಸ್ ಬಿಲ್ಲ (24)ನನ್ನು ಇದೇ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 12 ಲಕ್ಷ 80 ಸಾವಿರ ಮೌಲ್ಯದ ಟಿ.ಟಿ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ವಾಹನ ಕಳವು ಮಾಡುತ್ತಿದ್ದುದ್ದಲ್ಲದೆ ಮನೆಯಲ್ಲಿದ್ದವರನ್ನು ಚಾಕು ತೋರಿಸಿ ಬೆದರಿಸಿ, ಕಳ್ಳತನ ಮಾಡುತ್ತಿದ್ದ ಎಂದು ಅವರು ತಿಳಿಸಿದರು. ಆರೋಪಿಯ ಬಂಧನದಿಂದ 7 ಕಳವು ಪ್ರಕರಣಗಳು ಪತ್ತೆಯಾಗಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ