ಉದ್ಯೋಗ ನೀಡುವುದಾಗಿ ಯುವತಿಯರಿಗೆ ವಂಚನೆ !

Kannada News

26-07-2017

ಬೆಂಗಳೂರು: ಕಾಲೇಜಿನ ಕ್ಯಾಂಪಸ್‍ ನಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿ, ಕಾಲೇಜು ಯುವತಿಯರನ್ನು ನಗರಕ್ಕೆ ಕರೆತಂದು ವಂಚಿಸಿರುವ ಘಟನೆ ಕೆ.ಆರ್.ಪುರಂ ನ ವಿವೇಕ ಲೇಔಟ್‍ನಲ್ಲಿ ನಡೆದಿದೆ. ಮಡಿಕೇರಿಯ ಜನರಲ್ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 40 ಯುವತಿಯರಿಗೆ, ನಗರದ ಸಾಫ್ಟ್ ವೇರ್ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್ ಮಾಡಿ ನಗರಕ್ಕೆ ಕರೆತಂದು ವಂಚಿಸುವ ಯತ್ನ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವತಿಯರನ್ನು ರಕ್ಷಿಸಿದ್ದಾರೆ.

ಕಾಲೇಜಿನ ಕ್ಯಾಂಪಸ್‍ ನಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿ, ಆ ನಂತರ ಸೆಲೆಕ್ಟ್ ಆದ ಯುವತಿಯರಿಗೆ ಬೆಂಗಳೂರಿಗೆ ಬರಲು ಹೇಳಿ ನಕಲಿ ಉದ್ಯೋಗ ಅಹ್ವಾನ ಪತ್ರವನ್ನು ನೀಡಿದ್ದಾರೆ. ಅಷ್ಟೇಅಲ್ಲದೇ ಯುವತಿಯರಿಗೆ ಪಿ.ಜಿ ಮಾಡಿಕೊಡಲಾಗಿದ್ದು, ಇದಕ್ಕಾಗಿ ಹಣವನ್ನು ಸಹ ಗಣೇಶ್ ಎಂಬಾತ ಪಡೆದಿದ್ದಾನೆ. ಕಂಪನಿಯ ಕೆಲಸಕ್ಕೆ ಸೇರುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ಹೇಳಿದ್ದಾರೆ. ಇದಕ್ಕಾಗಿ ಮುಂಜಾನೆ ಆಹಾರ ಸೇವಿಸಬೇಡಿ ಇಡೀ ದೇಹದ ತಪಾಸಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿಯರು ನಕಲಿ ಉದ್ಯೋಗ ಅಹ್ವಾನ ಪತ್ರವನ್ನು ಪಡೆದ ಕಂಪನಿ ಬಳಿ ವಿಚಾರಿಸಿದ್ದಾರೆ. ಆಗಲೇ ಯುವತಿಯರಿಗೆ ತಮಗೆ ಮೋಸಹೋಗಿರುವ ಬಗ್ಗೆ ಅರಿವಿಗೆ ಬಂದಿದೆ. ಸುದ್ದಿ ತಿಳಿದು ಮಡಿಕೇರಿ ಪೊಲೀಸರು ಮತ್ತು ಬೆಂಗಳೂರು ಪೊಲೀಸರ ನೆರವಿನೊಂದಿಗೆ ಯುವತಿಯರ ರಕ್ಷಣೆ ಮಾಡಿ, ಆರೋಪಿ ಗಣೇಶ್‍ನನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ