ಸೆಕ್ಯುರಿಟಿ ಗಾರ್ಡ್ ನ ಬರ್ಬರ ಹತ್ಯೆ

Kannada News

26-07-2017

ಬೆಂಗಳೂರು: ಸೆಕ್ಯುರಿಟಿ ಗಾರ್ಡ್ ನೊಬ್ಬನನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಗರದ ಹೊರವಲಯದ ಬೆಳ್ಳಂದೂರು ಬಳಿ ಮಂಗಳವಾರ ರಾತ್ರಿ ನಡೆದಿದೆ. ಹರಳೂರಿನ ಲೇಕ್ ವ್ಯೂ ರೆಸಿಡೆನ್ಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ, ಅಸ್ಸಾಂ ಮೂಲದ ಹಸನ್ ಅಹಮದ್(23)ನನ್ನು ರಾತ್ರಿ 10 ರ ವೇಳೆ ಶೆಡ್ ಬಳಿಯೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆಮಾಡಿ ಪರಾರಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಲೇಕ್ ವ್ಯೂ ರೆಸಿಡೆನ್ಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಆತ, ಅಲ್ಲಿನ ಶೆಡ್‍ನಲ್ಲಿಯೇ ವಾಸಿಸುತ್ತಿದ್ದ. ಆದರೆ ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ