ಸಿಕ್ಕಿಬಿದ್ದ ಕಾರು ಕಳ್ಳ !

Kannada News

26-07-2017

ಬೆಂಗಳೂರು: ಮಹದೇವಪುರದ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಕಾರು ಕಳವು ಮಾಡಿದ್ದ, ಹುಳಿಮಾವುವಿನ ಲೋಕೇಶ್ವರ್ ಅಲಿಯಾಸ್ ಲೋಕೇಶ್ ನನ್ನು ಪೊಲೀಸರು ಬಂಧಿಸಿ 5 ಲಕ್ಷ 40 ಸಾವಿರ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ನಕಲಿ ಕೀ ಬಳಸಿ ಕಾರು ಕಳವು ಮಾಡಿ ಪರಾರಿಯಾಗಿದ್ದು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ನಗರದ  ಪುಟ್ಟೇನಹಳ್ಳಿ ಪೊಲೀಸರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಜೆಪಿ ನಗರದ ಮಣಿಕಂಠ (23)ನನ್ನು ಬಂಧಿಸಿ 55 ಸಾವಿರ ಮೌಲ್ಯದ 2 ಸ್ಕೂಟರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ನಕಲಿ ಕೀ ಬಳಸಿ ಸ್ಕೂಟರ್ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಹೆಚ್ಚಿವ ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ