ಪ್ರಯಾಣಿಕರಿಗೆ ವಂಚಿಸುತ್ತಿದ್ದ ಕಳ್ಳನ ಬಂಧನ !

Kannada News

26-07-2017

ಬೆಂಗಳೂರು: ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತ ಪ್ರಯಾಣಿಕರ ದುಬಾರಿ ಬೆಲೆ ವಸ್ತುಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹಳೆ ಕಳ್ಳ ಬೇಗೂರಿನ ಶ್ರೀವತ್ಸನ್ (23)ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4 ಲಕ್ಷ 2 ಸಾವಿರ ಮೌಲ್ಯದ 137 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಇನ್ನೊಂದೆಡೆ ಮೋಜಿನ ಜೀವನಕ್ಕಾಗಿ ಕನ್ನಗಳವು ಮಾಡುತ್ತಿದ್ದ ಕೋಲಾರದ ಕಲ್ಕೆರೆಯ ಮುನಿರಾಜು ಅಲಿಯಾಸ್ ದುಬೈ (38)ನನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿ 2 ಲಕ್ಷ 80 ಸಾವಿರ ಮೌಲ್ಯದ 92 ಗ್ರಾಂ ಚಿನ್ನಾಭರಣ, ಬುಲೆಟ್ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಕಬ್ಬನ್‍ಪಾರ್ಕ್, ಹನುಮಂತನಗರ, ಆನೇಕಲ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯು ಬಿಡಿಎ ನಿವೇಶನ ಹಾಗೂ ವಿಮಾ ಹಣ ಕೊಡಿಸುವುದಾಗಿ ನಂಬಿಸಿ ವಂಚನೆ ನಡೆಸಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ. ಬುಲೆಟ್ ಬೈಕ್ ನಲ್ಲೇ ಸಂಚರಿಸುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಆರೋಪಿಯು ಕನ್ನಗಳವು ಮಾಡುತ್ತಿದ್ದ ಎಂದು ಡಿಸಿಪಿ ಡಾ.ಶರಣಪ್ಪ ಶರಣಪ್ಪ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ