ಸರಣಿ ಅಪಘಾತ ವ್ಯಕ್ತಿ ಬಲಿ !

Kannada News

26-07-2017

ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯದ 8ನೇ ಮೈಲಿ ಬಳಿ ಕಾರೊಂದು, ಕ್ಯಾಂಟರ್ ಮತ್ತು 2 ಬೈಕ್‍ಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಕಂಬದಹಳ್ಳಿ ಮೂಲದ ವೆಂಕಟೇಶ್ (32)ಎಂದು ಗುರುತಿಸಲಾಗಿದೆ. ವೆಂಕಟೇಶ್ ಮಲ್ಲಸಂದ್ರದಲ್ಲಿ ಮರಳು ಲೋಡ್ ಅನ್‍ಲೋಡ್ ಮಾಡುವ ಕೆಲಸ ಮಾಡುತ್ತಿದ್ದು ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಗಾಯಗೊಂಡು ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸರಹಳ್ಳಿಯ ರವಿಬೀದಿ (42) ಅವರ ಸ್ಥಿತಿ ಚಿಂತಾಜನಕವಾಗಿದೆ.

ತುಮಕೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು 8ನೇ ಮೈಲಿ ಬಳಿ, ಸಿಗ್ನಲ್ ಇನ್ನೇನು ಬೀಳಲಿರುವುದನ್ನು ಎಗರಿಸಿ ಹೋಗುವಾಗ ಮುಂದಿನ ಕ್ಯಾಂಟರ್ ಹಾಗೂ 2 ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‍ನಲ್ಲಿದ್ದ ವೆಂಕಟೇಶ್, ಮತ್ತೊಂದು ಬೈಕ್‍ನಲ್ಲಿದ್ದ ರವಿಬೀದಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೆಂಕಟೇಶ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕಂಬನಹಳ್ಳಿ ಮೂಲದ ವೆಂಕಟೇಶ್ ಮರಳು ಲೋಡ್ ಅನ್‍ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಡಿಕ್ಕಿಯ ರಭಸಕ್ಕೆ 4 ವಾಹನಗಳು ಜಖಂಗೊಂಡಿವೆ. ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶೋಭಾರಾಣಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ